Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕ್ಲಾಂತ ಕಾಡಲ್ಲಿ ದೈವದರ್ಶನ --ರೇಟಿಂಗ್ : 3/5 ***
Posted date: 20 Sat, Jan 2024 10:22:54 AM
ಕ್ಲಾಂತಾ ಥ್ರಿಲ್ಲರ್ ಚಿತ್ರ. ಪ್ರಕೃತಿ ಸೌದರ್ಯ ಸವಿಯಲು ದಟ್ಟ ಕಾಡಿಗೆ ಹೋದ  ಯುವ ಪ್ರೇಮಿಗಳಿಬ್ಬರು  ಆ ಅಪರಿಚಿತ ಜಾಗದಲ್ಲಿ ಆಗಂತುಕರಿಂದ  ಎದುರಿಸಿದ  ತೊಂದರೆ, ತಾಪತ್ರಯಗಳು, ಸವಾಲುಗಳನ್ನು‌ ಕುತೂಹಲಕರವಾಗಿ ನಿರೂಪಿಸುವಲ್ಲಿ ನಿರ್ದೇಶಕ ವೈಭವ ಪ್ರಶಾಂತ್ ಗೆದ್ದಿದ್ದಾರೆ. ಚಿತ್ರದ ಕಥೆ ಇಷ್ಟು: ಚಾನೆಲ್‌ವೊಂದರ ನಿರೂಪಕಿಯೊಬ್ಬಳು  ಸೆನ್ಸೇಷನಲ್ ಸುದ್ದಿಯ ಹುಡುಕಾಟದಲ್ಲಿರುತ್ತಾಳೆ. ಲೈಬ್ರರಿಯಲ್ಲಿ ಆ ಕುರಿತು ಹುಡುಕಾಟ ನಡೆಸುತ್ತಿರುವಾಗ,  ಅಲ್ಲಿದ್ದ.  ವೃದ್ದರೊಬ್ಬರು  ಇವರ  ಹುಡುಕಾಟದ  ಕಾರಣ ವಿಚಾರಿಸಿ ನಂತರ  ಇಲ್ಲೊಂದು ರಿಯಲ್ ಕಥೆ ಹೊಂದಿದ  ಪುಸ್ತಕವಿದೆ. ಅದನ್ನು ಓದಿ, ಥ್ರಿಲ್ಲಿಂಗ್ ಆಗಿದೆ ಎಂದು ಹೇಳುತ್ತಾರೆ, ಆಗ ಆ ವರದಿಗಾರ್ತಿ ಆ ಪುಸ್ತಕವನ್ನು ಓದಲು ಪ್ರಾರಂಭಿಸುತ್ತಾಳೆ, ಓದುತ್ತ ಹೋದಂತೆ ಆ ಕಥೆಯಲ್ಲಿ ನಾನಾ ಥರದ ಕುತೂಹಲಕರ  ಸಂಗತಿಗಳು ಅನಾವರಣವಾಗುತ್ತ ಹೋಗುತ್ತವೆ, ಕಥಾನಾಯಕಿ ಇಂಚರ(ಸಂಗೀತಾ ಭಟ್) ತನ್ನ ಮನೆಯಲ್ಲಿ  ತಂದೆ ತಾಯಿಗೆ  ಸುಳ್ಳು ಹೇಳಿ  ತನ್ನ ಪ್ರೇಮಿ ಕರಣ್(ವಿಘ್ನೇಶ್) ಜೊತೆಗೆ  ಜಾಲಿ ರೈಡ್ ಹೊರಡುತ್ತಾಳೆ, ಕರಣ್ ಇಂಚರಳನ್ನು ಒಂದು ಸುಂದರ ಸ್ಥಳಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ  ಆ ಜಾಗವನ್ನು  ಹುಡುಕಿಕೊಂಡು ಜೀಪನಲ್ಲಿ  ಅರಣ್ಯಕ್ಕೆ ಬರುತ್ತಾರೆ. ಆದರೆ  ಆ ದಟ್ಟ ಕಾಡಿನಲ್ಲಿ  ದಾರಿತಪ್ಪಿ ಹೋಗಬೇಕಾದ ಸ್ಥಳ ಬಿಟ್ಟು ಬೇರೊಂದು ಜಾಗವನ್ನು ತಲುಪಿದಾಗ ಅಲ್ಲೇ ಓಡಾಡಿಕೊಂಡಿದ್ದ ಪುಂಡರ ಗುಂಪೊಂದು ಈ ಪ್ರೇಮಿಗಳಿಗೆ ಎದುರಾಗುತ್ತದೆ, ಡ್ರೋಣ್ ಕ್ಯಾಮೆರಾ ಮೂಲಕ ಕಾಡಿಗೆ ಯಾರೇ ಬಂದರೂ ಅವರನ್ನು ಕಂಡುಹಿಡಿದು ವಿಚಾರಿಸುವುದು ಅವರ ಹಾಬಿ, ಅಲ್ಲದೆ ತಾವು ನಡೆಸುತ್ತಿರುವ ಮರಗಳ ಕಳ್ಳಸಾಗಣೆಕೆ ವ್ಯವಹಾರವನ್ನು ಬಯಲಿಗೆಳೆಯಲು ಬರುವ ಅರಣ್ಯಾಕಾರಿಗಳಿಗೆ  ಚಿತ್ರಹಿಂಸೆ  ನೀಡಿ, ಅವರನ್ನು ನಿರ್ದಾಕ್ಷಿಣ್ಯವಾಗಿ  ಕೊಂದು  ಹಾಕುತ್ತಾರೆ,  ಆ ಗುಂಪಿನಲ್ಲಿರುವ  ಅಣ್ಣ, ತಮ್ಮ ಇಬ್ಬರೂ ಆ ಕಾಡಲ್ಲೇ ವಾಸಿಸುವ ಶ್ರೀಮಂತನ ಮಕ್ಕಳು, ಅವರಲ್ಲಿ ಚಿಕ್ಕವನು ಇಂಚರಳ ಸೌಂದರ್ಯ ನೋಡಿ ಆಕೆಯನ್ನು ಇಷ್ಟಪಡುತ್ತಾನೆ.  ಒಮ್ಮೆ  ಆ ಗುಂಪು ಅಧಿಕಾರಿಯೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ ಹಿಂಸಿಸುತ್ತಿರುವಾಗ, ತನ್ನ  ಮೊಬೈಲ್‌ನಲ್ಲಿ  ಪ್ರಕೃತಿ ಸೊಬಗನ್ನು ಸೆರೆಹಿಡಿಯಲೆಂದು ಅಲ್ಲಿಗೆ ಬಂದಿದ್ದ ಇಂಚರ,  ಇವರ ಕೃತ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ನೋಡುತ್ತಾಳೆ.  ಈಕೆ ತಾವು ಕೊಲೆ ಮಾಡ್ತಿರೋದನ್ನು ಶೂಟ್ ಮಾಡಿದ್ದಾಳೆಂದು ಭಾವಿಸಿ ಅವಳನ್ನು  ಹಿಡಿಯಲು ಧಾವಿಸುತ್ತಾರೆ. 
 
ಇಂಚರ ತಪ್ಪಿಸುಕೊಳ್ಳಲು ಪ್ರಯತ್ನಿಸುತ್ತಾಳೆ, ಅದೇ ಸಮಯಕ್ಕೆ ಅಲ್ಲಿಗೆ ಬರುವ ಕರಣ್ ಆ ಪುಂಡರನ್ನು ಸೆದೆ ಬಡಿಯುತ್ತಾನೆ. ಹೀಗೇ ನಡೆಯುತ್ತಿದ್ದ ಹೊಡೆದಾಟದ ಸಂದರ್ಭದಲ್ಲಿ ಶ್ರೀಮಂತನ  ಚಿಕ್ಕ ಮಗ ಇಂಚರಳನ್ನು  ಬಲಾತ್ಕರಿಸಲು ಹೋಗುತ್ತಾನೆ. ಆಗ ಇಂಚರ ಆತನನ್ನು ಬಲವಾಗಿ ಹಿಂದೆ  ತಳ್ಳಿದಾಗ  ಆತ ಅಲ್ಲೇ ಸತ್ತು ಹೋಗುತ್ತಾನೆ.  ಮುಂದೆ ಆ ಪ್ರೇಮಿಗಳು ಮಗನನ್ನು ಕಳೆದುಕೊಂಡ ತಂದೆ,ಅಣ್ಣನನ್ನು ಹೇಗೆ ಎದುರಿಸಿದರು, ಕೊನೆಗೂ ಆ  ಕಾಡಿಂದ ಅವರು  ತಪ್ಪಿಸಿಕೊಂಡು ಬರಲು ಅವರಿಗೆ  ಯಾರು ಸಹಾಯ ಮಾಡಿದರು, ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ ಒಮ್ಮೆ ಚಿತ್ರಮಂದಿರಕ್ಕೆ ತೆರಳಿ ಕ್ಲಾಂತ  ವೀಕ್ಷಿಸಬೇಕು. ಮುಖ್ಯವಾಗಿ ಆ ರಿಪೋರ್ಟರ್‌ಗೆ ಮಾಹಿತಿ ನೀಡಿದ ತಾತ ಯಾರು ಎನ್ನುವುದೇ ಕುತೂಹಲಕರ ಸಂಗತಿ. ಆಕರ್ಷಕ ಕಥಾವಸ್ತುವಿನ ಜೊತೆಗೆ ದೈವಿಕಶಕ್ತಿ ಮತ್ತು ಕುಟುಂಬದ ಮಹತ್ವವನ್ನು ಹೇಳುವ ಕಥೆಯಿದು. ಇಡೀ ಚಿತ್ರದಲ್ಲಿ ನಾಯಕಿ ಸಂಗೀತಾ ತನ್ನ  ಲವಲವಿಕೆಯ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ, ಹೆಚ್ಚು ಮಾತಾಡುವುದೂ ಸಹ ಅವರ ಪಾತ್ರವೇ. ಇನ್ನು ನಾಯಕ ವಿಘ್ನೇಶ್ ಅಭಿನಯಕ್ಕಿಂತಲೂ  ಆಕ್ಷನ್ ಸೀನ್‌ಗಳಲ್ಲಿ  ವಿಜೃಂಭಿಸಿದ್ದಾರೆ. ಬ್ಯಾಕ್ ಗ್ರೌಂಡ್ ಸ್ಕೋರ್ ನಲ್ಲಿ ಇನ್ನಷ್ಟು ಕೆಲಸ ಮಾಡಬಹುದಿತ್ತು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕ್ಲಾಂತ ಕಾಡಲ್ಲಿ ದೈವದರ್ಶನ --ರೇಟಿಂಗ್ : 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.